ಪೀಠಿಕೆ:
ನಿಮಗೆ ಒಳ್ಳೆಯ ಸುದ್ದಿ ನೀವು ಕೇಂದ್ರ ಸರ್ಕಾರದ ಉದ್ಯೋಗದ ಕನಸು ಕಾಣುತ್ತಿದ್ದೀರಾ? ಹಾಗಿದ್ದಲ್ಲಿ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ಭಾರತೀಯ ರೈಲ್ವೇ ಇಲಾಖೆಯು 2026ನೇ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ರೈಲ್ವೆಯಲ್ಲಿ ತನ್ನ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಲಕ್ಷಾಂತರ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ. ಈ ಬಾರಿ ಸುಮಾರು 22,190 ಗ್ರೂಪ್ ಡಿ (Group D) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಕರ್ನಾಟಕದ ಯುವಜನತೆಯೂ ಸೇರಿದಂತೆ ದೇಶಾದ್ಯಂತ ಇರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಈ ಲೇಖನದಲ್ಲಿ ನಾವು ಈ ಬೃಹತ್ ನೇಮಕಾತಿಯ ಸಂಪೂರ್ಣ ವಿವರಗಳನ್ನು ವಿಶ್ಲೇಷಿಸಲಿದ್ದೇವೆ. ಅರ್ಜಿ ಸಲ್ಲಿಸುವ ವಿಧಾನದಿಂದ ಹಿಡಿದು, ಪರೀಕ್ಷಾ ಪ್ರಕ್ರಿಯೆಯವರೆಗಿನ ಹಂತ ಹಂತದ ಮಾಹಿತಿ ಇಲ್ಲಿದೆ.
ಹುದ್ದೆಗಳ ವಿವರಣೆಗಳು:
ಇಲಾಖೆ ಹೆಸರು ನೋಡುವುದಾದರೆ ರೈಲ್ವೆ ಇಲಾಖೆಯಲ್ಲಿ ಗ್ರೂಪ್ ಡಿ ಅಂತ ಹುದ್ದೆಗೆ ಅರ್ಜಿ ಸಲ್ಲಿಸಲು ಆಹ್ವಾನಿಸಿದೆ. ಈ ಹುದ್ದೆಯಲ್ಲಿ ಒಟ್ಟು 22,190 ಹುದ್ದೆಗಳು ಖಾಲಿ ಇರುತ್ತವೆ. ಈ ಉದ್ಯೋಗವು ಕೇಂದ್ರ ಸರ್ಕಾರದ ಉದ್ಯೋಗ ಆಗಿರುತ್ತದೆ. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿ ನೋಡುವುದಾದರೆ ಪ್ರತಿ ತಿಂಗಳು 18 ಸಾವಿರದಿಂದ 52,000 ವರಿಗೆ ವೇತನ ಇರುತ್ತದೆ.
ಪ್ರಮುಖ ದಿನಾಂಕಗಳು
ಅರ್ಜಿ ಪ್ರಕ್ರಿಯೆಯು ಆನ್‌ಲೈನ್ ಮೂಲಕ ನಡೆಯಲಿದ್ದು, ಪ್ರಮುಖ ದಿನಾಂಕಗಳನ್ನು ನಿಮ್ಮ ಕ್ಯಾಲೆಂಡರ್‌ನಲ್ಲಿ ಗುರುತು ಮಾಡಿಕೊಳ್ಳಿ
- ಅರ್ಜಿ ಸಲ್ಲಿಸಲು ಆರಂಭದ ದಿನಾಂಕ:31 ಫೆಬ್ರವರಿ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02 ಮಾರ್ಚ್ 2026
- ಪರೀಕ್ಷಾ ದಿನಾಂಕ:2026 ಜೂನ ಅಥವಾ ಜುಲೈ ತಿಂಗಳಲ್ಲಿ ಇರಬಹುದು.
ಗಮನಿಸಿ: ಕೊನೆಯ ದಿನದವರೆಗೆ ಕಾಯುವುದು ಬೇಡ. ಸರ್ವರ್ ಸಮಸ್ಯೆ ತಪ್ಪಿಸಲು ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.
ವೇತನ ಶ್ರೇಣಿ
ರೈಲ್ವೇ ಗ್ರೂಪ್ ಡಿRRB GROUP D ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕ ಹಂತದಲ್ಲಿ 18,000 ರೂ.ಗಳಿಂದ ಸಂಬಳ ಶುರುವಾಗುತ್ತದೆ. ಇದು ಕೆಲಸದ ಅನುಭವ ಮತ್ತು ಭತ್ಯೆಗಳ ಆಧಾರದ ಮೇಲೆ 52,000 ರೂ.ಗಳವರೆಗೆ ಏರಿಕೆಯಾಗುವ ಸಾಧ್ಯತೆ ಇರುತ್ತದೆ. ಇದರೊಂದಿಗೆ ರಿಯಾಯಿತಿ ದರದ ರೈಲ್ವೇ ಟಿಕೆಟ್, ವೈದ್ಯಕೀಯ ಸೌಲಭ್ಯ ಮತ್ತು ವಸತಿ ಸೌಲಭ್ಯಗಳೂ ದೊರೆಯಲಿವೆ.
ವಯೋಮಿತಿ
ಅಭ್ಯರ್ಥಿಗಳ ಕನಿಷ್ಠ ವಯಸ್ಸುRRB Group D ಯಲ್ಲಿ 18 ರಿಂದ 33 ವರ್ಷ. ಅಧಿಸೂಚನೆ ಪ್ರಕಾರ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಮತ್ತು ಅಭ್ಯರ್ಥಿಗಳಿಗೆ ಐದು ವರ್ಷಗಳು ವಯಸ್ಸಿನ ಮಿತಿ ಸಡಿಲಿಕೆ ಇರುತ್ತದೆ.
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು 10ನೇ ತರಗತಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿರಬೇಕು. ಹಾಗೂ ಐಟಿಐ ಪ್ರಮಾಣ ಪತ್ರವನ್ನು ಹೊಂದಿರಬೇಕು. ಡಿಪ್ಲೋಮಾ ಇರುವಂಥ ಅಭ್ಯರ್ಥಿಗಳು ಡಿಪ್ಲೋಮಾದ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.
ಅರ್ಜಿ ಶುಲ್ಕ:
ರೈಲ್ವೇ ಇಲಾಖೆಯು ಅರ್ಜಿ ಶುಲ್ಕದ ವಿಷಯದಲ್ಲಿ ಅಭ್ಯರ್ಥಿಗಳಿಗೆ ಒಂದು ವಿಶೇಷ ಸೌಲಭ್ಯವನ್ನು ನೀಡುತ್ತದೆ:
- ಸಾಮಾನ್ಯ ವರ್ಗದ ಅಭ್ಯರ್ಥಿಗಳು: 500 ರೂ. ಅರ್ಜಿ ಶುಲ್ಕ. ಆದರೆ ಪರೀಕ್ಷೆಗೆ ಹಾಜರಾದ ನಂತರ 400 ರೂ.ಗಳನ್ನು ನಿಮ್ಮ ಬ್ಯಾಂಕ್ ಖಾತೆಗೆ ಮರುಪಾವತಿ ಮಾಡಲಾಗುತ್ತದೆ.
- SC/ST ಮತ್ತು ಮಹಿಳಾ ಅಭ್ಯರ್ಥಿಗಳು: 250 ರೂ. ಅರ್ಜಿ ಶುಲ್ಕ. ಪರೀಕ್ಷೆಗೆ ಹಾಜರಾದ ನಂತರ ಪೂರ್ಣ 250 ರೂ.ಗಳನ್ನು ಮರುಪಾವತಿ ಮಾಡಲಾಗುತ್ತದೆ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಜಾತಿ ಆದಾಯ ಪ್ರಮಾಣ ಪತ್ರ
- ಇತ್ತೀಚಿನ ಫೋಟೋ
- ಸಹಿ
- ನಿವಾಸ ಪ್ರಮಾಣ ಪತ್ರ
- 10ನೇ ತರಗತಿ ಅಂಕಪಟ್ಟಿ
- ಐಟಿಐ ಪ್ರಮಾಣ ಪತ್ರ
- ಇಮೇಲ್ ಐಡಿ
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ.
- ರೈಲ್ವೇ ಇಲಾಖೆಯು ಪಾರದರ್ಶಕವಾಗಿ ಆಯ್ಕೆಯನ್ನು ನಡೆಸಲು ನಾಲ್ಕು ಹಂತಗಳನ್ನು ರೂಪಿಸಿದೆ:
- CBT (Computer Based Test): ಇದು ಮೊದಲ ಹಂತದ ಲಿಖಿತ ಪರೀಕ್ಷೆ. ಇಲ್ಲಿ ಸಾಮಾನ್ಯ ಜ್ಞಾನ, ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.
- PET (Physical Efficiency Test): ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ದೈಹಿಕ ಸಾಮರ್ಥ್ಯದ ಪರೀಕ್ಷೆ ಇರುತ್ತದೆ. ಇದರಲ್ಲಿ ಓಟ ಮತ್ತು ತೂಕ ಹೊರುವ ಸ್ಪರ್ಧೆಗಳು ನಡೆಯುತ್ತವೆ.
- ದಾಖಲೆಗಳ ಪರಿಶೀಲನೆ (Document Verification): ಮೇಲಿನ ಎರಡು ಹಂತಗಳಲ್ಲಿ ಅರ್ಹತೆ ಪಡೆದವರ ಮೂಲ ದಾಖಲೆಗಳನ್ನು ಇಲಾಖೆ ಪರಿಶೀಲಿಸುತ್ತದೆ.
- ವೈದ್ಯಕೀಯ ಪರೀಕ್ಷೆ (Medical Examination): ಅಭ್ಯರ್ಥಿಯು ರೈಲ್ವೇ ಕೆಲಸಕ್ಕೆ ದೈಹಿಕವಾಗಿ ಸದೃಢರಾಗಿದ್ದಾರೆಯೇ ಎಂದು ಪರೀಕ್ಷಿಸಲು ಕೊನೆಯದಾಗಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಅರ್ಜಿ ಸಲ್ಲಿಸುವ ಹಂತಗಳು
- ಅರ್ಜಿ ಸಲ್ಲಿಸಲು ರೈಲ್ವೇ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ:
- ಮೊದಲು ಅಧಿಕೃತ ವೆಬ್‌ಸೈಟ್‌ನಲ್ಲಿ "CEN 2026" ಲಿಂಕ್ ಅನ್ನು ಹುಡುಕಿ ಕ್ಲಿಕ್ ಮಾಡಿ.
- ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಬಳಸಿ ನೋಂದಣಿ (Registration) ಮಾಡಿಕೊಳ್ಳಿ.
- ನಿಮ್ಮ ಶೈಕ್ಷಣಿಕ ಮಾಹಿತಿ ಮತ್ತು ವೈಯಕ್ತಿಕ ವಿವರಗಳನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
- ಕೇಳಲಾದ ದಾಖಲೆಗಳನ್ನು ನಿಗದಿತ ಗಾತ್ರದಲ್ಲಿ ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
- ಅಂತಿಮವಾಗಿ ಸಬ್ಮಿಟ್ (Submit) ಬಟನ್ ಒತ್ತಿ ಮತ್ತು ಅರ್ಜಿಯ ಪ್ರತಿಯನ್ನು ಪ್ರಿಂಟ್ ತೆಗೆದುಕೊಳ್ಳಿ.
ಅಧಿಕೃತ ವೆಬ್‌ಸೈಟ್
ತೀರ್ಮಾನ
ರೈಲ್ವೇ ಇಲಾಖೆಯ ಈ ನೇಮಕಾತಿಯು ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದ ಯುವಕರಿಗೆ ಉತ್ತಮ ಭವಿಷ್ಯವನ್ನು ಕಟ್ಟಿಕೊಡಲಿದೆ. ಐಟಿಐ ಮುಗಿಸಿ ಕೆಲಸ ಹುಡುಕುತ್ತಿರುವವರಿಗೆ ಇದೊಂದು ಅದ್ಭುತ ಅವಕಾಶ. ನಿಮ್ಮ ಸಿದ್ಧತೆಯನ್ನು ಇಂದೇ ಆರಂಭಿಸಿ. ಪರೀಕ್ಷೆಯ ಬಗ್ಗೆ ಯಾವುದೇ ಅನುಮಾನಗಳಿದ್ದಲ್ಲಿ ಅಧಿಕೃತ ವೆಬ್‌ಸೈಟ್ ಅನ್ನು ಮಾತ್ರ ನಂಬಿರಿ
👇👇👇👇

Post a Comment