ಭಾರತೀಯ ಅಂಚೆ ಇಲಾಖೆಯಲ್ಲಿ ಹುದ್ದೆಗಳು 2026 : ಒಟ್ಟು ಹುದ್ದೆಗಳ ಸಂಖ್ಯೆ 28,740 - ಇವತ್ತೆ ಅರ್ಜಿ ಸಲ್ಲಿಸಿ..!

ಪೀಠಿಕೆ:

ನೀವು ಹತ್ತನೆಯ ತರಗತಿಯ ಪಾಸಾಗಿದ್ದೀರಾ ಹಾಗಿದ್ದರೆ ನಿಮ್ಮಗೆ ಇಲ್ಲಿದೆ ಸುವರ್ಣ ಅವಕಾಶ.. 2026 ನೇ ವರ್ಷದಲ್ಲಿ ಭಾರತೀಯ ಅಂಚೆ ಇಲಾಖೆಯಲ್ಲಿ (GDS) ಅಂದರೆ ಗ್ರಾಮೀಣ ಡಾಕ್ ಸೇವಕ್, (BPM) ಮತ್ತು (ABPM)ಯಲ್ಲಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. 2026 ಈ ವರ್ಷದಲ್ಲಿ 28,740 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ:

• ಅರ್ಜಿ ಸಲ್ಲಿಸುವ ಆರಂಭ ದಿನಾಂಕ
  - 31- ಜನೆವರಿ -2026
• ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 
  - 14 - ಫೆಬ್ರವರಿ - 2026
• ಶುಲ್ಕವನ್ನು ಪಾವತಿಸುವ ಕೊನೆಯ ದಿನಾಂಕ 
  - 16 - ಫೆಬ್ರವರಿ - 2026
ಅಪ್ಲಿಕೇಶನ್ ಹಾಕುವಾಗ ಯಾವುದೇ ರೀತಿಯ ತಿದ್ದುಪಡಿ ಇದ್ದರೆ ಅದನ್ನು     ಸರಿಪಡಿಸಿಕೊಳ್ಳುವ ದಿನಾಂಕ 
  - 18 ಮತ್ತು 19 ಫೆಬ್ರವರಿ - 2026

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: 
  • 10 ನೇ ತರಗತಿ ಅಂಕಪಟ್ಟಿ 
  • ಇತ್ತೀಚಿನ ಫೋಟೋ 
  • ಸಹಿ
  • ಜಾತಿ ಆದಾಯ ಪ್ರಮಾಣ ಪತ್ರ 
  • ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಮಾಧ್ಯಮ ಪ್ರಮಾಣ ಪತ್ರಗಳು 
  • ಆಧಾರ್ ಕಾರ್ಡ್ 
  • ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆ 
  • ಇಮೇಲ್ ಐಡಿ 

ಅರ್ಹತೆಗಳು (Eligibility) :

ವಯೋಮಿತಿ: ಅಂಚೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯೋಮಿತಿ 18 ರಿಂದ 40 ವರ್ಷಗಳು ಆಗಿರಬೇಕು. SC,ST ಮತ್ತು OBC ಅಭ್ಯರ್ಥಿಗಳಿಗೆ ನಿಯಮದಂತೆ  ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.

ವಿದ್ಯಾರ್ಹತೆ: ಅಂಚೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ SSLC ಪಾಸ್ ಆಗಿರಬೇಕು. ಇಂಗ್ಲಿಷ್ ಮತ್ತು ಗಣಿತ ವಿಷಯವನ್ನು ಕಡ್ಡಾಯವಾಗಿ ಓದಲು ಮತ್ತು ಬರೆಯಲು ಬರಬೇಕು.

ಇತರೆ ಮಾಹಿತಿ: ಅಭ್ಯರ್ಥಿಗಳು ಸ್ಥಳೀಯ ಭಾಷೆಯ ಜ್ಞಾನ ಹೊಂದಿರಬೇಕು. ಅದರ ಜೊತೆಗೆ ಕಂಪ್ಯೂಟರ್ ಜ್ಞಾನ ಮತ್ತು ಸೈಕಲ್ ತುಳಿಯುವ ಕೌಶಲ್ಯ ವನ್ನು ಹೊಂದಿರಬೇಕು.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗೆ ಯಾವುದೇ ರೀತಿಯ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ ಇರುವುದಿಲ್ಲ. ಈ ಹುದ್ದೆಗೆ ನಿಮ್ಮ SSLC ಯಲ್ಲಿ ಪಡೆದಿರುವ ಅಂಕಗಳ ಆಧಾರದ ಮೇಲೆ ಅಂದರೆ ( Merit List) ಮುಖಾಂತರ ಆಯ್ಕೆ ಮಾಡಿ ಕೊಳ್ಳುತ್ತಾರೆ.

ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವುದು ಹೇಗೆ ?

  1. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಚೆ ಇಲಾಖೆಯ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  2. ವೆಬ್ಸೈಟ್ ನಲ್ಲಿ ಮೊದಲಿಗೆ ಅಭ್ಯರ್ಥಿಗಳು ರಿಜಿಸ್ಟರ್ ಮಾಡಿಕೊಳ್ಳಬೇಕು. 
  3. ಅಭ್ಯರ್ಥಿಗಳು ರಿಜಿಸ್ಟರ್ ಆದ ನಂತರ ಕೇಳುವ ಎಲ್ಲಾ ಶೈಕ್ಷಣಿಕ ದಾಖಲೆಗಳ ಮಾಹಿತಿ ಒದಗಿಸ ಬೇಕು.
  4. ಅಂಚೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಾವತಿಸ ಬೇಕು.
  5. ನಂತರ ಫೈನಲ್ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಮತ್ತು ಪ್ರಿಂಟ್ ಅನ್ನು ತೆಗೆದುಕೊಳ್ಳಿ.












Comments